top of page

ದೇವಾಲಯದ ಪ್ರಸ್ತುತ ಪರಿಸ್ಥಿತಿಯ ವಿವರಗಳು [ಆಯಾ ಚಿತ್ರಗಳೊಂದಿಗೆ]
Details of the current situation of the temple [with the respective pictures]

test2.jpg

ನವೀಕರಣ

Front1_edited.jpg

ಈ ದೇವಾಲಯವನ್ನು ಸುಮಾರು 11/12 ಶತಮಾನದಲ್ಲಿ ಚೋಳ ರಾಜವಂಶದಿಂದ ನಿರ್ಮಿಸಲಾಯಿತು ಮತ್ತು ನಂತರ ಹೊಯ್ಸಳ ಮತ್ತು ವಿಜಯನಗರ ರಾಜರಿಂದ ನವೀಕರಿಸಲಾಯಿತು.  ಗ್ರಾಮಸ್ಥರ ಪ್ರಕಾರ, 19/20 ಶತಮಾನದವರೆಗೂ ಜನರು ಪ್ರಾರ್ಥನೆ ಮಾಡಲು ದೇವಾಲಯವನ್ನು ತೆರೆಯಲಾಗಿದೆ. ನಂತರ ಅಜ್ಞಾತ ಕಾರಣಗಳಿಂದ ಅದನ್ನು ಮುಚ್ಚಲಾಯಿತು ಮತ್ತು ದೇವಾಲಯವನ್ನು ಬಹಳ ವಿರಳವಾಗಿ ತೆರೆಯಲಾಯಿತು. ಎಲ್ಲಾ ಸಸ್ಯಗಳು, ಜೇಡರ ಬಲೆಗಳು ಇತ್ಯಾದಿಗಳನ್ನು ಪ್ರಾರಂಭಿಸಿದ ನಂತರ ನಾವು ವಿಜಯದಶಮಿ (14 ಅಕ್ಟೋಬರ್, 2021) ರಿಂದ ದೇವಸ್ಥಾನವನ್ನು ತೆರೆಯುತ್ತೇವೆ. ಇದೀಗ ಗ್ರಾಮಸ್ಥರಿಂದ ದೇವಸ್ಥಾನವನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ, ಈ ಇಡೀ ಕಾರ್ತಿಕ ಮಾಸದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಈ ದೇವಾಲಯವನ್ನು ಸುಮಾರು 11/12 ಶತಮಾನದಲ್ಲಿ ಚೋಳ ರಾಜವಂಶದಿಂದ ನಿರ್ಮಿಸಲಾಯಿತು ಮತ್ತು ನಂತರ ಹೊಯ್ಸಳ ಮತ್ತು ವಿಜಯನಗರ ರಾಜರಿಂದ ನವೀಕರಿಸಲಾಯಿತು. ಗ್ರಾಮಸ್ಥರ ಪ್ರಕಾರ, 19/20 ಶತಮಾನದವರೆಗೂ ಜನರು ಪ್ರಾರ್ಥನೆ ಮಾಡಲು ದೇವಾಲಯವನ್ನು ತೆರೆಯಲಾಗಿತ್ತು.  ನಂತರ ಅದನ್ನು ಅಪರಿಚಿತ ಕಾರಣಗಳಿಂದ ಮುಚ್ಚಲಾಯಿತು  ದೇವಾಲಯವನ್ನು ಬಹಳ ವಿರಳವಾಗಿ ತೆರೆಯಲಾಯಿತು.  ಎಲ್ಲಾ ಸಸ್ಯಗಳು , ಜೇಡರ ಬಲೆಗಳು ಇತ್ಯಾದಿಗಳನ್ನು ಸ್ವಚ್ಛಗೊಳಿಸಿದ ನಂತರ ನಾವು ವಿಜಯದಶಮಿ (14 ಅಕ್ಟೋಬರ್, 2021) ರಿಂದ ದೇವಸ್ಥಾನವನ್ನು ಪುನಃ ತೆರೆಯುತ್ತೇವೆ.  .  ಇದೀಗ ಗ್ರಾಮಸ್ಥರ ನೆರವಿನಿಂದ ದೇವಸ್ಥಾನವನ್ನು ಪ್ರತಿದಿನ ತೆರೆಯಲು ವ್ಯವಸ್ಥೆ ಮಾಡಲಾಗಿದ್ದು, ಈ ಇಡೀ ಕಾರ್ತಿಕ ಮಾಸದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

This is the front view of the present temple.

It is facing east.

It can be seen that rooftops are loose, undergrowth and weeds.

In front of the temple there is a cavalry tree

The iron door is temporarily built as there is no main entrance in the temple.

test1f.jpg

The carvings on the four pillars in front of the temple can be seen in all four directions. It is noticeable that such a pillar is scattered.

ದೇವಸ್ಥಾನದ ಮುಂಭಾಗದಲ್ಲಿರುವ  ನಾಲ್ಕೂ ಕಂಬಗಳ ಮೇಲೆ ಚಿತ್ರಿಸಿರುವ  ಕೆತ್ತನೆಯ ವೈಶಿಷ್ಟ್ಯವನ್ನು ನಾಲ್ಕೂ ದಿಕ್ಕುಗಳಲ್ಲಿ  ಸೆರೆಹಿಡಿದಿರುವುದನ್ನು ಕಣ್ಣ್ತುಂಬಿ ಕೊಳ್ಳಬಹುದಾಗಿದೆ. ಇಂತಹ ಕಂಬದಲ್ಲಿ ಅಲ್ಲಲ್ಲಿ ತುಂಡಾಗಿರುವುದನ್ನು ಗಮನಿಸಬಹುದು.

ದೇವಾಲಯದ ಬಲಭಾಗ [ದಕ್ಷಿಣ ಭಾಗ]
Right side of the temple [south side]

ಇದು ದೇವಸ್ಥಾನದ ಬಲಭಾಗದ ದೃಶ್ಯಗಳು.

ದಕ್ಷಿಣ ದಿಕ್ಕಿನ ಸುತ್ತು ಪ್ರಾಕಾರದ ಗೋಡೆಗಳು ಸಂಪೂರ್ಣವಾಗಿ ಹಾಳಾಗಿರುವ ದೃಶ್ಯವನ್ನು ಕಾಣಬಹುದು.  

These are the sights on the right side of the temple. The south-facing wraparound walls can be seen completely ruined.

test3.jpg

ತದನಂತರ ಇದನ್ನು ಇಟ್ಟೆಗೆ ಇಂದ ಪುನರ್ನಿರ್ಮಿಸಿರುವುದು (ಚಿತ್ರ 3)ಮತ್ತು ಮಳೆಯಿಂದಾಗಿ ಶಿಥಿಲಗೊಂಡಿರುವುದು ಗೋಚರಿಸುತ್ತದೆ.

It is then reconstructed from the bed (Figure 3) and appears to have been damaged by rain.

3 ಮತ್ತು 4 ನೇ ಚಿತ್ರದಲ್ಲಿ ಕಿಡಿಗೇಡಿಗಳು ನಿಧಿ ಇರುವ ಬಗ್ಗೆ ಶಂಕಿಸಿ ಗೋಡೆಯನ್ನು ಕೊರೆದಿರು ದೃಶ್ಯವನ್ನು ನೋಡಬಹುದು. 

In Figures 3 and 4, you can see a scene where the mischief-mongers scoured the wall, wondering where the treasure was.

ದೇವಾಲಯದ ಎಡಭಾಗ [ಉತ್ತರ ಭಾಗ]
Left side of the temple [north side]

ಇದು ದೇವಸ್ಥಾನದ ಎಡಭಾಗದ ತುಣುಕುಗಳು. ಇದು ಉತ್ತರ ದಿಕ್ಕಿನ ಗೋಡೆಗಳು ಅವಸಾನಗೊಂಡಿರುವ ಸ್ಥಿತಿಯಾಗಿದೆ

These are the pieces on the left side of the temple. This is the state of the north wall.

left1.jpg

ಬಲಭಾಗಕ್ಕಿಂತ ಎಡಭಾಗದ  ಗೋಡೆಗಳು  (8 ಮತ್ತು 9 ನೇ ಚಿತ್ರ) ಸಂಪೂರ್ಣ  ನಶಿಸಿದೆ. ಪ್ರಾಕಾರ ಗೋಡೆಗಳು ಬಂಡೆಗಳಿಂದ ನಿರ್ಮಿಸಲಾಗಿದ್ದು ಇವು ಸಂಪೂರ್ಣವಾಗಿ ನಶಿಸಿದೆ. ಮಳೆಯಿಂದಾಗಿ ಅಲ್ಲಲ್ಲಿ ಪಾಚಿ ಕಟ್ಟಿರುವುದನ್ನು ಗಮನಿಸಬಹುದು.

 The left wall (Figure 8 and 9) is more damaged than the right.  The walls of the courtyard are built of rocks and are completely destroyed. Algae can be seen scattered due to rain.

left2.jpg

ದೇವಾಲಯದ ಹಿಂಭಾಗ [ಪಶ್ಚಿಮ ಭಾಗ]
The back of the temple [west side]

ಇದು ದೇವಸ್ಥಾನದ ಹಿಂಭಾಗದ ಚಿತ್ರವಾಗಿದೆ. ಪಶ್ಚಿಮ ದಿಕ್ಕಿನ ಗೋಡೆಯಾಗಿದೆ. ಇದು ಗರ್ಭಗುಡಿಯ ಹಿಂಭಾಗವೂ ಆಗಿದೆ. ಚಪ್ಪಡಿಗಳು ಅಲ್ಲಲ್ಲಿ ಸಡಿಲಗೊಂಡಿರುವುದನ್ನು ಕಾಣಬಹುದು.
ದೇವಸ್ಥಾನದ ಗೋಡೆಗಳಲ್ಲಿ ಅಲ್ಲಲ್ಲಿ ಲಿಖಿತ ಶಾಸನಗಳನ್ನು ಕಾಣಬಹುದು.
ದೇವಸ್ಥಾನದ ಸುತ್ತಲೂ ಯಾವುದೇ ರೀತಿಯ ಸಂರಕ್ಷಣೆ ಇಲ್ಲದಿರುವುದರಿಂದ ಕಳ್ಳಕಾಕರ ಕಾಟ, ಕಿಡಿಗೇಡಿಗಳ ಉಪಟಳ ಹೆಚ್ಚಿರುವುದರಿಂದ ದೇವಸ್ಥಾನದ ಸುತ್ತಲೂ ಭದ್ರತೆಯ ಅಗತ್ಯತೆ ಇದೆ

This is a picture of the back of the temple. Is the west side wall. It is also the back of the sanctum. Slabs can be seen scattered and loosened. Inside the temple walls are written inscriptions. There is a need for security around the temple as there is no conservation around the temple.

back.jpg

ದೇವಾಲಯದ ಒಳಾಂಗಣ
The interior of the temple

ಇದು ದೇವಸ್ಥಾನದ ಒಳಾಂಗಣ ದೃಶ್ಯವಾಗಿದೆ. ಇದರಲ್ಲಿ ಗರ್ಭಗುಡಿ ಸೇರಿದಂತೆ ನಾಲ್ಕು ಪ್ರಾಕಾರಗಳನ್ನು ಕಾಣಬಹುದಾಗಿದೆ. ಇದರಲ್ಲಿನ ಗೋಡೆಗಳಲ್ಲಿ, ಮೇಲ್ಛಾವಣಿಯ ಚಪ್ಪಡಿಗಳಲ್ಲಿ ,ದೊಡ್ಡ ದೊಡ್ಡ ಸಂಧುಗಳನ್ನು ಗಮನಿಸಬಹುದಾಗಿದೆ. ದೇವಸ್ಥಾನದ ಯಾವುದೇ ಪರಾಂಗಣದಲ್ಲಿ ದ್ವಾರದ ಬಾಗಿಲುಗಳು, ನೆಲಹಾಸು ಕಾಣಸಿಗುವುದಿಲ್ಲ

This is the interior view of the temple. There are four temples, including the sanctum sanctorum. In the walls, in the roof slabs, there are many large meadows Door doors and floors are not visible in any of the temple

inside1.jpg

ಒಳಾಂಗಣದಲ್ಲಿ ಸಂಪೂರ್ಣವಾಗಿ ಸಡಿಲಗೊಂಡಿರುವ  ಗೋಡೆಗಳ ಮತ್ತು ಮೇಲ್ಛಾವಣಿಯ ದೃಶ್ಯಗಳು. ಮಳೆಗಾಲದಲ್ಲಿ ಗರ್ಭಗುಡಿ ಸೇರಿದಂತೆ ಇಡೀ ದೇವಾಲಯ ಜಲಾವೃತಗೊಳ್ಳುತ್ತದೆ. ಅಲ್ಲಲ್ಲಿ ನೀರು ನಿಲ್ಲುವುದೂ ಉಂಟು

Views of the walls and ceiling completely relaxed in the interior. During the rainy season, the entire temple, including the sanctum sanctorum, is aquatic. The water will stop there

inside2.jpg

ದೇವಸ್ಥಾನದ 2ನೇ ಪ್ರಾಕಾರದ ಒಳಾಂಗಣ ದೃಶ್ಯವಾಗಿದ್ದು. ಕನ್ನಹಾಕಿರುವ  ಸ್ಥಳದಲ್ಲಿ ತಾತ್ಕಾಲಿಕವಾಗಿ ಭದ್ರತೆಯ ವ್ಯವಸ್ಥೆ ಮಾಡಲಾಗಿರುವ  ದೃಶ್ಯ ಕಾಣಸಿಗುತ್ತದೆ ಹಾಗೂ ಸಡಿಲಗೊಂಡಿರುವ  ಛಾವಣಿ,ಕಂಬಗಳು ಅಂಕಣದ ದುಸ್ಥಿತಿಗೆ ಕನ್ನಡಿಯಾಗಿದೆ.

The inner courtyard of the temple is the 2nd. In the mirror, a temporary security arrangement is seen and a loose roof and pillars mirror the condition of the court.

inside4.jpg

ಈ ಚಿತ್ರಗಳಲ್ಲಿ ಕಂಬಗಳು ಮತ್ತು ನೆಲಹಾಸುಗಳ ಸ್ಥಿತಿ ಸ್ಪಷ್ಟವಾಗಿ ಗೋಚರಿಸುತ್ತದೆ.

The status of the pillars and the flooring can be clearly visible in these pictures. 

inside3.jpg
bottom of page